ಚಿತ್ರ: ಮಿಲನ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ
ಗಾಯನ: ಸೋನು ನಿಗಮ್

ನಿನ್ನಿಂದಲೆ.. ನಿನ್ನಿಂದಲೆ..
ಕನಸೊಂದು ಶುರುವಾಗಿದೆ
ನಿನ್ನಿಂದಲೆ.. ನಿನ್ನಿಂದಲೆ..
ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ!

ನಿನ್ನಿಂದಲೆ.. ನಿನ್ನಿಂದಲೆ..
ಕನಸೊಂದು ಶುರುವಾಗಿದೆ
ನಿನ್ನಿಂದಲೆ.. ನಿನ್ನಿಂದಲೆ..
ಮನಸಿಂದು ಕುಣಿದಾಡಿದೆ

ಇರುಳಲ್ಲಿ ಜ್ವರದಂತೆ ಕಾಡಿ ಈಗ ಹಾಯಾಗಿ ನಿಂತಿರುವೆ ಸರಿ ಏನು?
ಬೇಕಂತಲೆ ಮಾಡಿ ಏನೊ ಮೋಡಿ ಇನ್ನೆಲ್ಲೊ ನೋಡುವ ಪರಿ ಏನು?
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ
ನಿನ್ನಿಂದಲೆ.. ನಿನ್ನಿಂದಲೆ..
ಕನಸೊಂದು ಶುರುವಾಗಿದೆ

ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ ಸೊಂಪಾದ ಚೆಲುವಿನ ಗುಣಗಾನ
ಕೇದಿಗೆಗರಿ ಎಂಥ ನಿನ್ನ ನೋಟ ನನಗೇನೊ ಅಂದಂತೆ ಅನುಮಾನ
ಕಣ್ಣಿಂದಲೆ.. ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ
ನಿನ್ನಿಂದಲೆ.. ನಿನ್ನಿಂದಲೆ..
ಕನಸೊಂದು ಶುರುವಾಗಿದೆ
ನಿನ್ನಿಂದಲೆ.. ನಿನ್ನಿಂದಲೆ..
ಮನಸಿಂದು ಕುಣಿದಾಡಿದೆ

ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ!

ನಿನ್ನಿಂದಲೆ.. ನಿನ್ನಿಂದಲೆ..
ಕನಸೊಂದು ಶುರುವಾಗಿದೆ
ನಿನ್ನಿಂದಲೆ.. ನಿನ್ನಿಂದಲೆ..
ಮನಸಿಂದು ಕುಣಿದಾಡಿದೆ

Category: ಕನ್ನಡ ಚಿತ್ರಸಾಹಿತ್ಯ
Category: ಮಿಲನ ಚಿತ್ರ
Category: ಜಯಂತ್ ಕಾಯ್ಕಿಣಿ ಸಾಹಿತ್ಯ
Category:Kannada